Monday, August 10, 2009

ಶಬ್ದ ಮಾರಿ.. ದಾರಿ ಕೇರಿ...!!

ನಾವು ಕನ್ನಡಿಗರು. ವಿಶಾಲ ಹೃದಯದವರು. ಎಲ್ಲೆಡೆ ಸಹಬಾಳ್ವೆ, ಶಾಂತಿ ಪಾಠ ಬೋಧಿಸುವವರು. ಹೀಗೆ ಅನೇಕ ಬಿರುದು ಬಾವಲಿಗಳನ್ನು ಹೇಳ್ಕೊಳ್ತೇವೆ. ಇದರ ದ್ಯೋತಕವಾಗಿ ಆಗಸ್ಟ್ ಒಂಭತ್ತನೇ ತಾರೀಕಿಗೆ ಬೆಂಗಳೂರಿನ ಹಲಸೂರಿನಲ್ಲಿ ತಮಿಳು ಕವಿ ತಿರುವುಳ್ಳವರ್ ಪ್ರತಿಮೆ ಅನಾವರಣಕ್ಕೆ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ (ಎಲ್ಲಿದೆ ಕರುಣೆ ಅಂತ ಕೇಳಬೇಡಿ!) ಅವರಿಗೆ ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪ ಅವಕಾಶ ಮಾಡಿಕೊಟ್ರು.
* ಚಿತ್ರ ಕೃಪೆ: ಅಂತರ್ಜಾಲ

ಕಾಕತಾಳಿಯವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸ್ವಚ್ಚತಾ ವಾಹಿನಿ, ಅಂದ್ರೆ ಕಾರ್ಪೋರೇಶನ್ ಗಾಡಿಯ ಹಿಂದೆ ಕಾಣಿಸಿದ ಒಂದು ಉಕ್ತಿ ಇಲ್ಲಿದೆ. ಅದೂ ಆಗಸ್ಟ್ ೯ಕ್ಕೆ..! ''ಶಬ್ದ ಮಾರಿ ದಾರಿ ಕೇರಿ''. ಇದು ಉಭಯ ಭಾಷಿಕರ ನಡುವಿನ ಹೊಸ (ರಾಜಕಾರಣಿಗಳ ಪ್ರಕಾರ) ಸಂಬಂಧದ ಪ್ರತಿಫಲವೇ, ಅಥವಾ ಮಾಲಿನ್ಯ ನಗರಿಯಾಗಿರುವ ಬೆಂಗಳೂರಿನಲ್ಲಿ ಮುಂದೊಂದು ದಿನ ಶಬ್ದವನ್ನೂ ಮಾರಿ ಜೀವನ ಸಾಗಿಸಬಹುದು ಎಂಬ ಸಂಶೋಧನೆಯೇ...? ತಿಳಿದಿಲ್ಲ..!!
ಅದೇನು ಬೇಕಾದ್ರೂ ಆಗಿರಲಿ.. ತಮಿಳು ಕನ್ನಡ ನಡುವಿನ ಹೊಸ ಬಾಂಧವ್ಯದ ಮುನ್ನುಡಿ ಎಂದು ಬೀಗುವ ಸರ್ಕಾರ ಇಂತಹ ಉಕ್ತಿಗಳತ್ತ ನೋಡಬೇಕು ಎನ್ನುತ್ತಿದ್ದಾರೆ ನಮ್ಮ ಆಟೋಕ್ತಿ ರಾಜರು...! ನನ್ಡ್ರಿ.. ವಣಕ್ಕಂ...!! ಅಲ್ಲಲ್ಲ.. ಧನ್ಯವಾದಗಳು, ನಮಸ್ಕಾರ..!!

Saturday, August 1, 2009

ನಂಬಿಕೆಯ ಪಾಲಕ...!

ಚಿತ್ರ ಕೃಪೆ : ಸಿ ಎನ್ ಮಹೇಶ್.

ಕೇಶವಣ್ಣ..! ನಿನಗೊಂದು ಸಲಾಂ...! ''ನೆನಪಿರಲಿ ನಾನಿಮ್ಮ ಆಟೋ ಚಾಲಕ, ನಿಮ್ಮ ಪ್ರೀತಿ ಸ್ನೇಹದ ನಂಬಿಕೆಯ ಪಾಲಕ, ನಿಮ್ಮ ಶುಭ ಪ್ರಯಾಣದ ಜೊತೆಯ ನಾವಿಕ, ಕನ್ನಡ ನಾಡು ನುಡಿಯ ಪ್ರಾಮಾಣಿಕ ಸೈನಿಕ''. ನಿನ್ನ ಈ ಉಕ್ತಿಯನ್ನು ಎಲ್ಲ ಆಟೋ ಚಾಲಕರೂ ಪಾಲಿಸುವಂತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಅಲ್ವ...?!

Tuesday, July 14, 2009

ಸಾಸಿವೆಯಷ್ಟಾದ್ರು ಪ್ರೀತಿಸು...

ಮನಸ್ಸು ನೋಯಿಸೋದಕ್ಕಿಂತ ಒಬ್ಬನ ಮುಖದಲ್ಲಿ ನಗು ತರಿಸಿದರೆ ಅದೇ ದೊಡ್ಡ ಪುಣ್ಯ ಕಾರ್ಯ ಅಲ್ವ.. ಮುಖ ಗಂಟಿಕ್ಕಿಕೊಂಡು ಇರುವ ಜನಕ್ಕೆ ಇದೊಂದು ಉಕ್ತಿ.. ''ಸಾಗರದಷ್ಟು ನೋಯಿಸುವುದಕ್ಕಿಂತ ಸಾಸಿವೆಯಷ್ಟು ಪ್ರೀತಿಸು!!''.

Monday, July 13, 2009

ಇದು ಬೆಂಕಿ ವಿಚಾರ...!

ಇದು ಮಾತ್ರ ಸ್ವಲ್ಪ ಬೇಜಾರಿನ ಆಟೋಕ್ತಿ...! ''ನಾನು ಕೊಟ್ಟ ಹೃದಯಕ್ಕೆ ಅವಳು ಇಟ್ಟ ಬೆಂಕಿ''. ಆದರೆ, ಅವಳು ಬೆಂಕಿ ತರೋ ತನಕ ಈತ ಏನು ಮಾಡ್ತಾ ಇದ್ದ..? ಒಂದು ಬಕೆಟ್ ನೀರು ಜೊತೆಗೆ ಇಟ್ಟಿರೋದು ತಾನೆ...?!

ಡೆಡಿಕೇಟೆಡ್ ಟು ವಿರಹೀಸ್...!

ಕ್ರೇಜಿ ಸ್ಟಾರ್ ರವಿಚಂದ್ರನ್ ತಮ್ಮ ಸಿನೆಮಾದಲ್ಲಿ ಹೇಳಿದ ಹಾಗೆ ಪ್ರೀತಿ ಮಾಡಬಾರದು, ಆಮೇಲೆ ಪೋಯ್ಸನ್ ತಗೊಳ್ಬಾರದು ಅಲ್ವ..? ಒಂದು ವೇಳೆ ಅಂಥವರು ಯಾರಾದ್ರು ನಮ್ಮ ನಿಮ್ಮ ನಡುವೆ ಇದ್ದರೆ ಅವರಿಗಾಗಿ ಮಂಡ್ಯದ ಹುಡುಗನ ಈ ಆಟೋಕ್ತಿ...! ಡೆಡಿಕೇಟೆಡ್ ಟು ವಿರಹೀಸ್..! '' ಲೇ ಚಿನ್ನಾ..! ಪ್ರೀತ್ಸೋ ಮುನ್ನ ಯೋಚಿಸು. ಪ್ರೀತ್ಸೋದ್ಯಾಕೆ ಫೀಲಿಂಗ್ ಯಾಕೆ...?'' ;)

ಎಲ್ಲಿ ನಿಂತು ಕೂಗೋದು ಸ್ವಾಮೀ..!?

ಆಕಾಶವೆ ಬೀಳಲಿ, ಭೂಮಿಯೇ ಬಿರಿಯಲಿ ನಾನೆಂದೂ ನಿನ್ನ ಜೊತೆಗಿರುವೆ ಅಂತ ಪ್ರೇಮಿಯನ್ನ ಹೊಗಳಿ ಅಟ್ಟಕ್ಕೆ ಇಡುವ ಕವಿಗಳು ಈ ಆಟೋಕ್ತಿಯತ್ತ ಸ್ವಲ್ಪ ನೋಡ್ಬೇಕು ಅಂತ ನನ್ನ ಕೋರಿಕೆ...! ''ಆಕಾಶ ಬಿದ್ದರೆ, ಭೂಮಿ ಬಿರಿದರೆ ಎಲ್ಲಿ ನಿಂತು ಕೂಗಲಿ'' ಅನ್ನೋದು ಆಟೋ ರಾಜನ ತಲೆ ತಿಂತಾ ಇರುವ ಪ್ರಶ್ನೆ...! ನೀವೇನ್ ಸಜೆಸ್ಟ್ ಮಾಡ್ತೀರಿ...?! ಅವನೂ ನಾನು ನಿಮ್ಮ ಸಲಹೆಗಳಿಗೆ ಕಾಯ್ತಾ ಇದೇವೆ...!

ನೋ ಪೋಲಿಸ್ & ಲೇಡಿಸ್ ರಾಷ್...!!


'ಆಟೋಕ್ತಿ' ಬ್ಲಾಗ್ ನ ಮೊದಲ ಉಕ್ತಿ ಇದು...! ಬರಹ ಹೀಗಿದೆ... ''ದುಡಿಯೋದು ಮುರು ಕಾಸು. ಹಾಕಿದ್ರು ಪೋಲಿಸ್ನೋರು ಒಂದು ಕೇಸು. ಹಿಡಿ ಮನೆ ಕಡೆ ಪಾಸು. ಹೆಂಡ್ತಿ ಕೇಳಿದ್ರೆ ಕಾಸು, ಹಿಡ್ಕಂಡು ಎರಡು ಬಾರ್ಸು...!!''. ಅಪ್ಪಾ ಗುರುವೇ.. ಪೋಲಿಸ್ನೋರು ಕೇಸು ಹಾಕಿದ್ರೆ ನಿನ್ ಹೆಂಡ್ತಿ ಯಾಕೆ ಬಾಸುಂಡೆ ತಿನ್ಬೇಕು ಅಂತ ಗೊತ್ತಾಗಿಲ್ವಲ್ಲೋ...!!

ಇದು 'ಆಟೋಕ್ತಿ' ಗಳಿಗಾಗಿ ಮೀಸಲು...!

ಹಾಯ್ ಫ್ರೆಂಡ್ಸ್...!
ದಿನಂಪ್ರತಿ ಅದೆಷ್ಟೋ ಆಟೋಗಳನ್ನ ನಾವು ನೋಡ್ತೇವೆ, ಅವುಗಳ ಹಿಂದೆ-ಮುಂದೆ ಹೋಗ್ತೇವೆ. ಹೀಗೆ ಆಟೋಗಳ ಹಿಂದೆ ಹೋದಾಗ ನಮಗೆ ಸಾಕಷ್ಟು ಬಾರಿ 'ಸೋ ಫನ್ನಿ' ಎನ್ನುವಂತಹ ವಾಕ್ಯಗಳು ಕಾಣ ಸಿಗುತ್ತವೆ. ಅವು ಆಟೋ ಚಾಲಕರ ಅನುಭವದ್ದೆ ಇರಬಹುದು, ಯಾವುದೋ ಸಿನೆಮಾದಲ್ಲಿ ಹೀರೋ-ಹೀರೋಯಿನ್ ನಡುವಿನ ಪ್ರೇಮ ಸಂಭಾಷಣೆ ಆಗಿರಬಹುದು. ಅದೇ ರೀತಿ ಭಗ್ನ ಪ್ರೇಮಿಯೊಬ್ಬನ ವಿಷಾದದ ನುಡಿಯಿರಬಹುದು. ಹೀಗೆ ತಮ್ಮ ಮನಸ್ಸಿಗೆ ಸರಿ ಎಂದೆನಿಸಿದ ವಾಕ್ಯಗಳನ್ನ ತಮ್ಮ ಆಟೋ ಹಿಂದೆ ಬರೆಸಿಕೊಳ್ಳುವುದು ಆಟೋ ಚಾಲಕ-ಮಾಲಕರಿಗೆ ಒಂಥರಾ ಹವ್ಯಾಸ.

ಇಲ್ಲಿ ಕೇವಲ ಆಟೋಕ್ತಿ ಬಗ್ಗೆ ಮಾತ್ರ ಬರೆಯುತ್ತಿಲ್ಲ. ಯಾವುದೇ ವಾಹನಗಳ ಹಿಂದೆ ಕಾಣಿಸಿದ ಘೋಷ ವಾಕ್ಯಗಳನ್ನ ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸಿದ್ದೇನೆ... ಎಲ್ಲಾ ಹಾಗೆ ಸುಮ್ಮನೆ ಅಷ್ಟೆ...! ನೋಡಿ ಸಿಂಪ್ಲಿ ಎಂಜಾಯ್ ಮಾಡಿ.. :) ಸಾಧ್ಯ ಆದ್ರೆ ಒಂದು ಸ್ಮೈಲ್ ಮಾಡಿ ಬಿಟ್ಟು ಬಿಡಿ...! ನಿಮ್ಮ ಫೀಡ್ ಬ್ಯಾಕ್ಗಾಗಿ ಕಾಯ್ತಾ ಇರ್ತೇನೆ...